ನಮ್ಮ ನಾಲ್ವರ ಪ್ರೀತಿಯ ಅಮ್ಮ, ರಾಧಮ್ಮ !

ಈಗ ಪ್ರತಿವರ್ಷವೂ ‘ಮದರ್ಸ್ ಡೇ’, ‘ವಿಮೆನ್ಸ್ ಡೇ’, ‘ಫಾದರ್ಸ್ ಡೇ’ ಇವುಗಳ ಆಚರಣೆಯನ್ನು ಕೆಲವು ಸಾಮಾಜಿಕ ತಾಣಗಳಲ್ಲಿ ನೋಡುವುದು, ಮತ್ತೆ ಅದರಮೇಲೆ ಲೈಕ್ ಕ್ಲಿಕ್ ಮಾಡುವುದು, ಸರ್ವೇ ಸಾಮಾನ್ಯವಾಗಿ ಹೋಗಿದೆ.

ಉದಾಹರಣೆಗೆ ಒಬ್ಬ ತಾಯಿಯನ್ನು ವರ್ಷಕ್ಕೊಮ್ಮೆಯಾದರೂ ನೆನೆಯಲು ಹುಟ್ಟಿಕೊಂಡಿರುವ ಜಾಗಗಳೋ ಎನ್ನುವಂತೆ ಭಾಸವಾಗುವ ಅವುಗಳ ಮೌಲ್ಯ ಅಪಾರವಾದದ್ದು. ಒಟ್ಟಿನಲ್ಲಿ ಮಕ್ಕಳು ತಮ್ಮ ತಾಯಿತಂದೆಯರನ್ನು ಯಾವಾಗಲೂ ತಮ್ಮ ಹೃದಯದಲ್ಲಿ ಸ್ಥಾಪಿಸಿಕೊಳ್ಳಬೇಕು. ಪ್ರತಿಗಳಿಗೆಯಲ್ಲೂ ಅವರು ಮಾಡಿದ ತ್ಯಾಗ ಮತ್ತು ತೋರಿದ ಒಲವುಗಳನ್ನು ಲೆಕ್ಕಹಾಕುತ್ತಾ ಹೋದರೆ ಅದೊಂದು ದೊಡ್ಡ ಹೊತ್ತಿಗೆಯಾದೀತು. ಇದು ಪ್ರತಿಯೊಬ್ಬ ತಾಯಿಯೂ ತನ್ನ ಮಕ್ಕಳಿಗೆ ಯಾವ ಅಪೇಕ್ಷೆಯನ್ನೂ ಮನಸ್ಸಿನಲ್ಲಿಟ್ಟುಕೊಳ್ಳದೆ ಮಾಡಿದ/ಮಾಡುತ್ತಿರುವ ಸೇವೆಯಾಗಿರುತ್ತದೆ. ತಾಯಿಯ ಋಣವನ್ನು ಜನ್ಮ ಜಣ್ಮಾಂತರಗಳಲ್ಲೂ ತೀರಿಸಲಾರದ್ದು. ಅದೊಂದು ಅನುಪಮ ಕೊಡುಗೆ. ಕೇವಲ ಒಂದು ದಿನವಾದರೂ ಅವರ ಪ್ರೀತ್ಯಾದರಗಳನ್ನು ಒಮ್ಮೆ ನೆನೆದರೆ ನಮ್ಮ ಜನ್ಮ ಸಾರ್ಥಕವಾದೀತು.

ಮ್ಮ

Leave a comment